Browse audiobooks narrated by Balaji Manohar, listen to samples and when you're ready head over to Audiobooks.com where you can get 3 FREE audiobooks on us
"ಪ್ರಖ್ಯಾತ ಲೇಖಕರಾದ ಎಸ್. ಎಲ್. ಭೈರಪ್ಪನವರ 'ನಿರಾಕರಣ' ಕಾದಂಬರಿಯು ಸಂಸಾರವನ್ನು ನಿರಾಕರಿಸಿ ವ್ಯಕ್ತಿ ಸಮಾಜದ ಎಲ್ಲ ಸಂಬಂಧಗಳನ್ನೂ ಕಳಚಿಕೊಂಡು ಒಂಟಿಯಾಗುವ, ವಿರಕ್ತ ಜೀವನವನ್ನು ಬೋಧಿಸುವ ಭಾರತೀಯ ತತ್ತ್ವದ ಮುಖವೊಂದನ್ನು ವಿಶ್ಲೇಷಿಸುವ ಯತ್ನವಾಗಿದೆ.ಈ ಕಾದಂಬರಿಯ ನಾಯಕ ನರಹರಿಯ ವಾಸ್ತವ ಹಾಗೂ ಅದರ್ಶ ಜೀವನದ ನಿರಂತರ ಭ್ರಮಣೆಯೇ ಇಲ್ಲಿಯ ಕಥಾವಸ್ತು. ವ್ಯಕ್ತಿ ಹಾಗೂ ಸಮಾಜಕ್ಕಿರುವ ಅಭೇದ್ಯ ಸಂಬಂಧವನ್ನು ಕಾದಂಬರಿ ಪ್ರತಿಪಾದಿಸುತ್ತದೆ. ಐದು ಪುಟ್ಟ ಮಕ್ಕಳನ್ನು ಸಾಕಲು ಮನೆಯಲ್ಲಿ ಹೆಣ್ಣು ದಿಕ್ಕಿಲ್ಲದ ತಂದೆಯು, ಅವರನ್ನೆಲ್ಲ ದತ್ತು ಕೊಡುವುದಾಗಿ ಮುಂಬೈಯ ಟೈಮ್ಸ್ ಪತ್ರಿಕೆಯಲ್ಲಿ ಜಾಹೀರಾತು ಮಾಡುತ್ತಾನೆ. 'ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿಯೂ ಸೆಳೆದುಬಿಡುತ್ತದೆ – ವಿದ್ಯುತ್ ಶಾಕ್ ನಂತೆ. ಇಲ್ಲ, ಸ್ಪರ್ಶಕ್ಕೆ ಸಿಕ್ಕದಷ್ಟು ದೂರವೇ ಇರಬೇಕು. ಇದಕ್ಕೆ ಮಧ್ಯಮ ಸ್ಥಿತಿ ಇಲ್ಲ' ಎಂಬ ಗ್ರಹಿಕೆಯಿಂದ ಅವನು ನಿರ್ಧರಿಸುತ್ತಾನೆ. ಕನ್ನಡ ಕಾದಂಬರೀ ಪ್ರಪಂಚದಲ್ಲಿ ಒಂದು ವಿನೂತನ ಕೃತಿಯಾಗಿ 'ನಿರಾಕರಣ' ಓದುಗರ ಕೈ ಸೇರಿದೆ."
S. L. Bhyrappa (Author), Balaji Manohar (Narrator)
Audiobook
"'ಸಾಕ್ಷಿ'ಯು ಪುರಾಣ ಮತ್ತು ನಮ್ಮ ಈ ಇಂದ್ರಿಯ ವಾಸ್ತವ ಜಗತ್ತುಗಳನ್ನು ಜೋಡಿಸುವ ಮೂಲಕ ಮನುಷ್ಯನ ನೀತಿಯ ಬೇರುಗಳನ್ನು ಶೋಧಿಸುತ್ತದೆ. ನಿಜವೂ ನೀತಿಯ ನೆಲೆಯೋ, ನೀತಿಯು ನಿಜದ ನೆಲೆಯೋ ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಅರಗಿಸಿಕೊಂಡಿರುವ ಈ ಕಾದಂಬರಿಯ ಪಾತ್ರ ವೈಶಿಷ್ಟ್ಯ ರಚನಾ ವಿಧಾನ ಹಾಗು ಕಲಾತ್ಮಕ ಅನುಭವಗಳು ಭೈರಪ್ಪನವರ ಹಿಂದಿನ ಕಾದಂಬರಿಗಳಿಗಿಂತ ಮೂರು ಮೆಟ್ಟಿಲು ಮೇಲೆ ಹೋಗಿವೆ."
S.L. Bhyrappa (Author), Balaji Manohar (Narrator)
Audiobook
"'ಭಾರತೀಪುರ', ಸೃಷ್ಟ್ಯಾತ್ಮಕ ಬರಹಗಾರನೊಬ್ಬ ಕಂಡ ಆಳವಾದ ಒಂದು ವಿರಸದ ಸಮಗ್ರ ಪರಿಚಯದ ಅಸಲುಚಿತ್ರ. ಮೌಲ್ಯಗಳ, ಕಟ್ಟಡಗಳ, ವ್ಯಕ್ತಿಗಳ ನಡುವಣ ಈ ವಿರಸಕ್ಕೆ ಸಾಹಿತ್ಯಕವಾದದ್ದೇ ಅಲ್ಲದೆ, ಬಹುಬಾರಿ ಸಮಾಜಶಾಸ್ತ್ರದ್ದು ಹಾಗೂ ಒಮ್ಮೊಮ್ಮೆ ದಾರ್ಶನಿಕವಾದದ್ದು ಆದ ಆಯಾಮವೂ ಉಂಟು. ವಸ್ತುಸ್ಥಿತಿಯ ಮಟ್ಟದಲ್ಲಿ, ಕಾನಂಬರಿಯ ಮುಖ್ಯ ಗೊಡವೆ ಸಂಪ್ರದಾಯಬದ್ಧ ಸಮಾಜದ ಆಧುನೀಕರಣ; ಆ ಸಮಾಜದ ಮೂರ್ತ-ಅಮೂರ್ತ ಸಂಕೇತಗಳನ್ನು ತೊಡೆದುಹಾಕುವುದು; ಕನಿಷ್ಠ ಅವುಗಳನ್ನು ಅಪಮೌಲ್ಯಗೊಳಿಸುವುದು, ಹೊಸ ವಸ್ತುಸ್ಥಿತಯನ್ನು, ಮೌಲ್ಯಗಳನ್ನು ನಿರ್ಮಿಸುವುದು. ವ್ಯಕ್ತಿಯ ಮಟ್ಟದಲ್ಲಿ ಅದರ ಮುಖ್ಯ ಗೊಡವೆ ಬ್ರಾಹ್ಮಣ ಜಮೀನ್ದಾರನ ಕುಟುಂಬದಲ್ಲಿ ಹುಟ್ಟಿದ ಧೀಮಂತನೊಬ್ಬ ತನ್ನ ಜಾತಿ ಹಾಗೂ ವರ್ಗಗಳಿಂದ ಮುಕ್ತನಾಗಿ ತನ್ನ ವರ್ಗ-ಜಾತಿಯ ಶೋಷಣೆಗೆ ಗುರಿಯಾಗಿದ್ದ ದಲಿತರ ಜೊತೆಗೆ ಏಕೀಭಾವ ಸಾಧಿಸುವುದರ ಸಂಕಟ. ಇವೆಲ್ಲನ್ನು ಕಟ್ಟಿಕೊಟ್ಟಿರುವ ಕಾದಂಬರಿ ಮುಗಿಯುವುದು ಹೇಗೆ, ಬರಹಗಾರ ಕಾದಂಬರಿಯನ್ನು ಹೇಗೆ ಅಂತ್ಯಗೊಳಿಸಿದ್ದಾನೆ ಅನ್ನುವುದನ್ನು ತಿಳಿಯಲು ಓದಿ ಭಾರತೀಪುರ."
U.R. Ananthamurthy (Author), Balaji Manohar (Narrator)
Audiobook
"ಖ್ಯಾತ ಕಥೆಗಾರ ವಿವೇಕ ಶಾನಭಾಗ ಅವರ ಕಾದಂಬರಿ-ಸಕೀನಾಳ ಮುತ್ತು. ಲೇಖಕರು ಹೇಳುವಂತೆ 'ಏನೋ ಒಂದು ನಡೆದು ಅದಕ್ಕೆ ಕುಣಿಕೆ ಹಾಕಿ ಮತ್ತೇನೇನೋ ನಡೆಯುತ್ತ ಸಾಗುತ್ತದೆ. ಆದರೆ, ಕಾದಂಬರಿ ಇರುವುದು ನಡೆದಿದ್ದರ ಬಗ್ಗೆಯೋ ಅಥವಾ ನಡೆಯಿತೆಂದು ಗ್ರಹಿಸಲಾಗಿದ್ದರ ಬಗ್ಗೆಯೋ ಅಥವಾ ನಡೆಯಬಹುದಾದ ಸಾಧ್ಯತೆಗಳ ಬಗ್ಗೆಯೋ-ಇಂಥ ಪ್ರಶ್ನೆಗಳು ಈ ಕಾದಂಬರಿಯಲ್ಲಿ ಓದುಗನೆಂಬ ವಿಕ್ರಮನನ್ನು ಬೇತಾಳಗಳಾಗಿ ಕಾಡುತ್ತವೆ. ಹಾಗೆ ಕಥೆ ಕಾಣುವ ಮೂಲಕ ಓದುಗರಿಗೆ -ಸ್ವತಃ ಲೋಕವೇ ಹಾಗಿರಬಹುದೆ, ಸ್ಥಿರವೂ, ನಿಶ್ಚಿತವೂ ಎಂದು ತಿಳಿದ ಈ ಜೀವನ ವ್ಯಾಪಾರಗಳು ಕೇವಲ ಮನೋನಿರ್ಮಿತಗಳೆ? ಎಂಬೊಂದು ಗುಮಾನಿ ಉದ್ಭವಿಸಿದರೆ ಅದು ಕಾಕತಾಳೀಯವಾಗಿರಲಾರದೇನೋ...' ಎಂದು ಅಭಿಪ್ರಾಯಪಟ್ಟಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ."
Vivek Shanbhag (Author), Balaji Manohar (Narrator)
Audiobook
"Jaya: A Retelling Of The Mahabharata has the whole epic, which was originally known as Jaya, condensed into a tiny capsule in this book. Other than retelling the interesting parts of the Mahabharata, what makes this book a favourite among the readers is Pattanaik rendering of the various local folklores and tales that are associated with the epic, which have been presented in a whole new genre. With a master stroke, the author has elaborated the storyline by including lesser known folklore stories of the epic, while keeping intact its original form and style."
Devdutt Pattanaik (Author), Balaji Manohar (Narrator)
Audiobook
"ಖ್ಯಾತ ಕತೆಗಾರ ಯಶವಂತ ಚಿತ್ತಾಲರ ಮೊದಲ ಕಾದಂಬರಿ 'ಮೂರು ದಾರಿಗಳು'. ಈ ಕಾದಂಬರಿಯು ಮುಖ್ಯವಾಗಿ ಒಂದು ಪ್ರದೇಶದ ಅನುಭವವನ್ನು ಕಟ್ಟಿಕೊಡುತ್ತದೆ. ಹೀಗಾಗಿ ಇದನ್ನು ಪ್ರಾದೇಶಿಕ ಕಾದಂಬರಿ ಎಂದು ಕರೆಯಲಡ್ಡಿಯಿಲ್ಲ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಜನಜೀವನವನ್ನು ಚಿತ್ರಿಸುವ ಪ್ರಥಮ ಕಾದಂಬರಿ. ಈ ಮೊದಲು ವಿ.ಜಿ. ಭಟ್ಟ, ವಿ.ಜಿ. ಶಾನಭಾಗ ಹಾಗೂ ಯಶವಂತರ ಕತೆಗಳಲ್ಲಿ ಉತ್ತರ ಕನ್ನಡದ ಜೀವನ ದಾಖಲಾಗಿದೆ. ಆದರೆ, ಮೂರುದಾರಿಗಳು ಕಾದಂಬರಿಯಲ್ಲಿ ಅದು ಕಾದಂಬರಿಯಂತಹ ವಿಸ್ತೃತ ಸಾಹಿತ್ಯ ಪ್ರಕಾರ ಸೇರಿದ್ದು ಬಹುಶಃ ಇದೇ ಮೊದಲು. 'ಮೂರು ದಾರಿಗಳು' ಕಾದಂಬರಿಯಲ್ಲಿಯ ಪ್ರಾದೇಶಿಕತೆಯ ವೈಶಿಷ್ಟವು ಕೇವಲ ಹಿನ್ನೆಲೆಯಾಗಿ ಮಾತ್ರ ಬರುವುದಿಲ್ಲ. ಅದು ಕತೆಯ ಭಾಗವಾಗಿಯೇ ಬರುತ್ತದೆ. ಈ ಕಾದಂಬರಿಯ ಬಹುತೇಕ ಪಾತ್ರಗಳು ಕರಾವಳಿ ಪ್ರದೇಶದ ಅಲ್ಲಿಯ ಸಮಾಜಕ್ಕೆ ನಿಕಟವಾಗಿ ಸಂಬಂಧಿಸಿದವುಗಳು. ಜೀವನದೊಡಲಿನಿಂದ ಅವರ ವ್ಯಕ್ತಿತ್ವ ರೂಪುಗೊಂಡಿದೆ. ಹಾಗೂ ಆ ಕಕ್ಷೆಯಲ್ಲಿಯೇ ಅವರ ವೈಯಕ್ತಿಕ ಜೀವನ ನಡೆಯುತ್ತದೆ."
Yashwant Chittal (Author), Balaji Manohar (Narrator)
Audiobook
[Kannada] - Meluhada Mruthyunjaya
"The Indus Valley Civilisation,the inhabitants of that period called it the land of Meluha a near perfect empire created many centuries earlier by Lord Ram, one of the greatest monarchs that ever lived. This once proud empire and its Suryavanshi rulers face severe perils as its primary river, the revered Saraswati, is slowly drying to extinction. They also face devastating terrorist attacks from the east, the land of the Chandravanshis. To make matters worse, the Chandravanshis appear to have allied with the Nagas, an ostracised and sinister race of deformed humans with astonishing martial skills!"
Amish Tripathi (Author), Balaji Manohar (Narrator)
Audiobook
"ಈ ಕಥನವು ಘಟಿಸುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಕರಾವಳಿಯ ಈ ಜಿಲ್ಲೆಯಲ್ಲಿ ಹಲವು ನದಿಗಳು ಹರಿದು ಸಮುದ್ರ ಸೇರುತ್ತವೆ. ನದಿಯು ಸಮುದ್ರವನ್ನು ಸೇರುವ ತಾಣವು ದೂರದಿಂದ ಶಾಂತ ಮನೋಹರವಾಗಿ ತೋರಿದರೂ, ಆ ಅಳಿವೆಯ ನಡುವೆ ಹೋಗಿ ನೋಡಿದಾಗಲೇ ನದಿಯು ಸಾಗರವನ್ನು ಸೇರುವಾಗಿನ ಕೋಲಾಹಲ ಕಾಣುವುದು. ಅಂತೆಯೇ ಬದಲಾವಣೆಯೊಡನೆ ಸೆಣಸುತ್ತಿರುವ ಇಲ್ಲಿಯ ಜೀವನವೂ."
Vivek Shanbhag (Author), Balaji Manohar (Narrator)
Audiobook
[Kannada] - Galugambada Atankadali
"'ಸಾವಿನ ಸೆರಗಿನಲ್ಲಿ' ಕೃತಿಯ ಎರಡನೆಯ ಭಾಗವೇ ಈ ಕೃತಿ, 'ಗಲ್ಲುಗಂಬದ ಆತಂಕದಲ್ಲಿ'. ಇದರ ಹೆಸರೇ ಸೂಚಿಸುವಂತೆ ಮರಣದಂಡನೆಯ ಶಿಕ್ಷೆಗೆ ಈಡಾಗಿರುವ ಕೈದಿಗಳ ಕಥೆಗಳ ಗುಚ್ಛವಿದು."
D V Guruprasd (Author), Balaji Manohar (Narrator)
Audiobook
"ರಹಸ್ಯ ಮತ್ತು ಆಧ್ಯಾತ್ಮಿಕ ಪರಿಶೋಧನೆಯ ಬಲವಾದ ಕಥೆ. ಹರಿಕಥಾ ಪಠಣ ಮಾಡುವ ಎಪ್ಪತ್ತು ವರ್ಷದ ಶಾಸ್ತ್ರಿ ರೈಲಿನಲ್ಲಿ ಅಯ್ಯಪ್ಪ ಯಾತ್ರಿಕನನ್ನು ಎದುರಿಸುತ್ತಾನೆ. ಯಾತ್ರಿಕನ ಕುತ್ತಿಗೆಗೆ ಶ್ರೀ ಚಕ್ರ ತಾಯತವಿದೆ, ಇದು ಶಾಸ್ತ್ರಿ ಅವರ ಮೊದಲ ಹೆಂಡತಿ ಸರೋಜಾಗೆ ಸೇರಿದೆ. ಆದರೆ ಶಾಸ್ತ್ರಿ ಅವರು ಸರೋಜನನ್ನು ವರ್ಷಗಳ ಹಿಂದೆ ಕೊಂದಿದ್ದಾರೆಂದು ಭಾವಿಸಿದ್ದರು."
U.R. Ananthamurthy (Author), Balaji Manohar (Narrator)
Audiobook
"'ಈಸಾಡತಾವ ಜೀವಾ' ಲೇಖಕ ಶ್ರೀಧರ ಬಳಗಾರ ಅವರ ಕಥಾಸಂಕಲನ. ದಟ್ಟವಾದ ವಿವರಗಳು ಸನ್ನಿವೇಶಗಳನ್ನೂ, ಪಾತ್ರಗಳನ್ನೂ ಅಧಿಕೃತವಾಗಿ ಚಿತ್ರಿಸುವ ಬಳಗಾರರು ತಾವು ಕಟ್ಟಿಕೊಡುವ ಜೀವನಸಂದರ್ಭಗಳ ಮೂಲಕ ಸಮಕಾಲೀನ ನಾಗರೀಕತೆಯ ಸ್ವರೂಪವನ್ನೂ ಅದರ ವೈವಿಧ್ಯಮಯ ಪರಿಣಾಮಗಳನ್ನೂ ಸ್ಪರ್ಶಿಸಿಬಿಡುವ ಮಹತ್ವಾಕಾಂಕ್ಷೆಯಲ್ಲಿ ತಮ್ಮ ಕತೆಗಳನ್ನು ರಚಿಸಿದ್ದಾರೆ. ಸೂಕ್ಷ್ಮದಿಂದ ಸ್ತೂಲವನ್ನು, ಸ್ಥಳೀಯವಾದುದರಿಂದ ವಿಶ್ವಾತ್ಮಕವಾದುದನ್ನು ಮುಟ್ಟ ಬಯಸುವ ಇಲ್ಲಿನ ಕತೆಗಳು ಸಮಕಾಲೀನ ಕಥಾಸಾಹಿತ್ಯಕ್ಕೆ ಗುಣಾತ್ಮಕ ಸೇರ್ಪಡೆಗಳಾಗಿವೆ"
Sridhar Balagar (Author), Balaji Manohar (Narrator)
Audiobook
©PTC International Ltd T/A LoveReading is registered in England. Company number: 10193437. VAT number: 270 4538 09. Registered address: 157 Shooters Hill, London, SE18 3HP.
Terms & Conditions | Privacy Policy | Disclaimer